ಕಲ್ಲು ಹೃದಯದ ತಾಯಿ! ಕಸದಲ್ಲಿದ್ದ ಮಗುವಿಗೆ ಮರುಜನ್ಮ ನೀಡಿದ ಕುರಿಗಾಯಿಗಳು

ಬೆಳಗಾವಿ: ಹೆತ್ತ ಕರುಳನ್ನೇ ಕಸದ ತೊಟ್ಟಿಗೆ ಎಸೆಯುವ ಕಲಿಯುಗದ ಕ್ರೂರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದ್ದು, ನವಜಾತ ಗಂಡು ಶಿಶುವನ್ನು ಬ್ರಿಡ್ಜ್ ಕೆಳಗೆ ಎಸೆದು ಹೋದ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಲ್ಲು ಹೃದಯದ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನು ರಸ್ತೆಯ ಪಕ್ಕದ ಕಸದಲ್ಲಿ ಎಸೆದು ಪರಾರಿಯಾಗಿದ್ದಾಳೆ. ಕುರಿಗಾಯಿಗಳ ಸಮಯಪ್ರಜ್ಞೆ: ಮಗುವಿಗೆ ಮರುಜನ್ಮ ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಬ್ರಿಡ್ಜ್ ಕೆಳಗಡೆ ಈ ನವಜಾತ ಶಿಶುವನ್ನು ಎಸೆಯಲಾಗಿತ್ತು. […]

ಮತ್ತಷ್ಟು ಓದಿ..

ಭರಮ್ಯಾನಟ್ಟಿ ಗ್ರಾಮದಲ್ಲಿ ಕುಕೃತ್ಯ ಎಸಗಿದ್ದ ಮೂವರು ಕಂಬಿ ಹಿಂದೆ: ಮಾರಿಹಾಳ ಪೊಲೀಸರ ಭರ್ಜರಿ ಆಕ್ಷನ್

ಬೆಳಗಾವಿ: ವಿವಾಹಿತ ಮಹಿಳೆಯನ್ನು ಕರೆದೊಯ್ದ ಯುವಕನ ಮನೆ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಂಧಿತರನ್ನು ನಾಗರಾಜ್ ನಾಯಕ, ರವಿ ಬೀಜಗತ್ತಿ ಹಾಗೂ ಈಶ್ವರ ಮುಚ್ಚಂಡಿ ಎಂದು ಗುರುತಿಸಲಾಗಿದೆ. ಬಂಧಿತ ಮೂವರೂ ಆರೋಪಿಗಳು ವಿವಾಹಿತ ಮಹಿಳೆ ನಾಗವ್ವ ಹಾಗೂ ಆಕೆಯ ಪತಿ ಬಸಪ್ಪನ ಸಂಬಂಧಿಕರು ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆ: ಗ್ರಾಮದ ವಿವಾಹಿತೆ ನಾಗವ್ವ ಎಂಬಾಕೆಯನ್ನು […]

ಮತ್ತಷ್ಟು ಓದಿ..

ಸ್ನೇಹಿತನ ಪತ್ನಿ ಜೊತೆ ಯುವಕ ಎಸ್ಕೇಪ್: ಕತ್ತಿ, ತಲವಾರಿನೊಂದಿಗೆ ನುಗ್ಗಿ ಇಡೀ ಮನೆಯನ್ನೇ ಧ್ವಂಸಗೊಳಿಸಿದ ಉದ್ರಿಕ್ತರು!

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹಾಗೂ ಕಾನೂನು ಕೈಗೆತ್ತಿಕೊಂಡ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಕರೆದೊಯ್ದ ಯುವಕನ ಮನೆ ಮೇಲೆ ಎರಡು ನೂರಕ್ಕೂ ಹೆಚ್ಚು ಜನರ ಗುಂಪು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ, ಇಡೀ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವರದಿಯಾಗಿದೆ. ಈ ಗ್ರಾಮವು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಸದ್ಯ ಇಡೀ ಭಾಗದಲ್ಲಿ ತೀವ್ರ ಆತಂಕ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. […]

ಮತ್ತಷ್ಟು ಓದಿ..

ಗಂಡು ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೇಳಿದ್ದೇ ತಪ್ಪಾಯ್ತಾ? ಆಪ್ತ ಗೆಳೆಯನನ್ನೇ ಕಲ್ಲಿನಿಂದ ಜಜ್ಜಿ ಕೊಂದ ಪಾಪಿ!

ಬೆಳಗಾವಿ: ಕ್ಷಣಿಕ ಆವೇಶ ಹಾಗೂ ಮದ್ಯದ ಅಮಲು ಮತ್ತೊಂದು ಬಲಿಯನ್ನ ಪಡೆದಿದೆ. ಗಂಡು ಮಗು ಜನಿಸಿದ ಖುಷಿಗೆ ಪಾರ್ಟಿ ಕೇಳಿದ ಆಪ್ತ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ವಣ್ಣೂರ ಗ್ರಾಮದ ನಿವಾಸಿ ಹಣಮಂತಪ್ಪ ಇಟಗಿ ಕೊಲೆಯಾದ ದುರ್ದೈವಿ. ಕ್ರೈಂ ಹಿನ್ನೆಲೆ: ಪಾರ್ಟಿ ಕೇಳಿದ್ದೇ ಕೊಲೆಯಲ್ಲಿ ಅಂತ್ಯ! ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ವಿಶ್ವನಾಥ ಪೂಜೇರಿಗೆ ಇತ್ತೀಚೆಗಷ್ಟೇ ಗಂಡು ಮಗು ಜನಿಸಿತ್ತು. ಇದೇ ಖುಷಿಯಲ್ಲಿ […]

ಮತ್ತಷ್ಟು ಓದಿ..

ನಾಲ್ಕನೇಯದು ಹೆಣ್ಣೆಂದು ಕತ್ತು ಹಿಸುಕಿ ಮೂರು ದಿನದ ಹಸುಳೆಯನ್ನ ಕೊಲೆಗೈದ ಪಾಪಿತಾಯಿ: ರಾಮದುರ್ಗ ಪೊಲೀಸರಿಂದ ಕೊಲೆಗಡುಕಿ ಬಂಧನ

ಬೆಳಗಾವಿ: ಬೆಳಗಾವಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಮೂರು ದಿನದ ಹೆಣ್ಣು ಕಂದಮ್ಮನನ್ನ ಕತ್ತುಹಿಸಿಕಿ ಕೊಲೆ ಮಾಡಲಾಗಿದೆ. ಹೆತ್ತವಳೇ ಕಂದಮ್ಮಳನ್ನ ಕೊಂದಿದ್ದು ಪಾಪಿ ಕೊಲೆಗಾರ್ತಿ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಲಿದ್ದಾರೆ. ಗಡಿಜಿಲ್ಲೆ ಬೆಳಗಾವಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ, ಎಂಥವರ ಎದೆಯೂ ಝಲ್ ಎನ್ನಿಸುವಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ನೀವು ಹೀಗೆ ಮೇಲೆ ನೋಡಿರೋ ಪೋಟೋ ನವಜಾತ ಹೆಣ್ಣು ಶಿಶುವಿನದ್ದು. ಕಳೆದ ಮೂರು ದಿನಗಳ ಹಿಂದೆಯಷ್ಟೇ ತಾಯಿ‌ ಗರ್ಭದಿಂದ ಜನ್ಮ ಪಡೆದಿದ್ದ ಹಸುಗುಸಿನ ಕೊಲೆಯಾಗಿದ್ದು, […]

ಮತ್ತಷ್ಟು ಓದಿ..

ಕೋರ್ಟ್ ನಲ್ಲಿ ಜಡ್ಜ್ ಎದುರಲ್ಲೇ ಮಾರಕಾಸ್ತ್ರದಿಂದ ಹೊಡೆದು ಮಹಿಳೆಯ ಕೊಲೆ ಯತ್ನ

ಅಥಣಿ: ಕೋರ್ಟ್ ಕಲಾಪ ನಡೆಯುವ ವೇಳೆ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಅಥಣಿ ನ್ಯಾಯಾಲಯದಲ್ಲಿ ನಡೆದಿದೆ. ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋತನಟ್ಟಿ ಗ್ರಾಮದ ಬಾಬಾಸಾಹೇಬ್ ಚೌಹಾಣ ಎಂಬಾತ ಹಲ್ಲೆ ಮಾಡಿದ್ದ ಆರೋಪಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಾಬಾಸಾಹೇಬ್ ಸೋದರತ್ತೆ ಮೀನಾಕ್ಷಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ವಿಚಾರವಾಗಿ ಅನೇಕ ಬಾರಿ ಜಗಳವಾಗಿತ್ತು. ಇವತ್ತು ಸೋದರತ್ತೆ […]

ಮತ್ತಷ್ಟು ಓದಿ..

ಬೆಳಗಾವಿಯಲ್ಲಿ ಉಸಿರುಗಟ್ಟಿ ಮೂವರ ದಾರುಣ ಸಾವು; ಓರ್ವ‌ನ ಸ್ಥಿತಿ ಚಿಂತಾಜನಕ

ಬೆಳಗಾವಿ: ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಬಂದಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪದ್ದು, ಓರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಬೆಳಗಾವಿಯಲ್ಲಿ ವಿಪರೀತ ಚಳಿ ಇರುವ ಹಿನ್ನೆಲೆ ಮನೆಯ ರೂಮಿನಲ್ಲಿ ಇದ್ದಿಲಿನಿಂದ ಬೆಂಕಿ ಹಚ್ಚಿ ಕೆಂಡ ಮಾಡಿ ಹತ್ತಿರದಲ್ಲೇ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರು ತೀವ್ರ ನಿದ್ರೆಗೆ ಜಾರಿದ್ದಾರೆ. ಚಳಿಗೆ ಬಿಸಿಯಾಗಲೇಂದು ಪಕ್ಕದಲ್ಲೇ ಇದ್ದಿಲು ಕೆಂಡ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರಿಗೆ ಉಸಿರುಗಟ್ಟಿದೆ ಎನ್ನಲಾಗಿದೆ. ನಿದ್ರೆಗೆ ಜಾರಿದಾಗ ರೂಮನಲ್ಲೇ ಹೊಗೆಯಾಡಿ ಉಸಿರಾಟದ ಸಮಸ್ಯೆಯಿಂದ […]

ಮತ್ತಷ್ಟು ಓದಿ..