ಬೆಳಗಾವಿಯಲ್ಲಿ ಉಸಿರುಗಟ್ಟಿ ಮೂವರ ದಾರುಣ ಸಾವು; ಓರ್ವ‌ನ ಸ್ಥಿತಿ ಚಿಂತಾಜನಕ

ಬೆಳಗಾವಿ ರಾಜ್ಯ

ಬೆಳಗಾವಿ: ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಬಂದಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪದ್ದು, ಓರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಬೆಳಗಾವಿಯಲ್ಲಿ ವಿಪರೀತ ಚಳಿ ಇರುವ ಹಿನ್ನೆಲೆ ಮನೆಯ ರೂಮಿನಲ್ಲಿ ಇದ್ದಿಲಿನಿಂದ ಬೆಂಕಿ ಹಚ್ಚಿ ಕೆಂಡ ಮಾಡಿ ಹತ್ತಿರದಲ್ಲೇ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರು ತೀವ್ರ ನಿದ್ರೆಗೆ ಜಾರಿದ್ದಾರೆ. ಚಳಿಗೆ ಬಿಸಿಯಾಗಲೇಂದು ಪಕ್ಕದಲ್ಲೇ ಇದ್ದಿಲು ಕೆಂಡ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರಿಗೆ ಉಸಿರುಗಟ್ಟಿದೆ ಎನ್ನಲಾಗಿದೆ.

ನಿದ್ರೆಗೆ ಜಾರಿದಾಗ ರೂಮನಲ್ಲೇ ಹೊಗೆಯಾಡಿ ಉಸಿರಾಟದ ಸಮಸ್ಯೆಯಿಂದ ಮೂವರು ಯುವಕರು ಒದ್ದಾಡಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಳಗಾವಿಯ ಅಮನ್ ನಗರದ ನಿವಾಸಿ ರಿಹಾನ್ ಮತ್ತೆ (22), ಮೋಹಿನ್ ನಾಲಬಂದ (23) ಮತ್ತು ಸರ್ಫರಾಜ್ ಹರಪ್ಪನಹಳ್ಳಿ,(22) ಸಾವನ್ನಪ್ಪಿದ್ದು, ಮತ್ತೋರ್ವ ಯುವಕನ ಶಹಾನವಾಜ್ (19) ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ಘಟನಾ ಸ್ಥಳಕ್ಕೆ ಮಾಳಮಾರುತಿ ಪೊಲೀಸರು, ಸ್ಥಳಿಯ ಶಾಸಕ ಆಸೀಫ್ ಸೇಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವಕರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ಸಂಬಂಧ ಮಾಳಮಾರುತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *