ಹಿಂಡಾಲ್ಕೋ ಕಂಪನಿಯಲ್ಲಿ ಕಾರ್ಮಿಕ ಆತ್ಮಹತ್ಯೆ; ಕಲ್ಲು ತೂರಾಟ, ಸ್ಥಳದಲ್ಲಿ ಬಿಗುವಿನ ವಾತಾವರಣ!

ಬೆಳಗಾವಿ: ಇಲ್ಲಿನ ಹೊರವಲಯದಲ್ಲಿರುವ ಪ್ರಸಿದ್ಧ ಹಿಂಡಾಲ್ಕೋ ಕಂಪನಿಯ ಆವರಣದಲ್ಲಿ ಯುವ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ನೂರಾರು ಜನ ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸದ್ಯ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.‌ ಬೆಳಗಾವಿ ತಾಲೂಕಿನ ಮುತ್ತ್ಯಾನಟ್ಟಿ ಗ್ರಾಮದ ನಿವಾಸಿ ಶಂಕರ್ ತಳವಾರ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ. ಈ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ವಾಟ್ಸಾಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್! […]

ಮತ್ತಷ್ಟು ಓದಿ..

ಬೆಳಗಾವಿಯಲ್ಲಿ ಆಧಾರ್ ಸೇವಾ ಕೇಂದ್ರ ಉದ್ಘಾಟನೆ

ಬೆಳಗಾವಿ, ಜೂ.24: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವತಿಯಿಂದ ಬೆಳಗಾವಿಯಲ್ಲಿ ಸ್ಥಾಪಿಸಲಾದ ಆಧಾರ್ ಸೇವಾ ಕೇಂದ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುಐಡಿಎಐ ಉಪನಿರ್ದೇಶಕಿ ಸಿರಿ ಆನಂದ್ ವಿ. ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಯುಐಡಿಎಐ ಕೈಗೊಂಡಿರುವ ನಾಗರಿಕ ಸ್ನೇಹಿ ಸೇವಾ ಕ್ರಮಗಳನ್ನು ಶ್ಲಾಘಿಸಿದರು. ಸಾರ್ವಜನಿಕರ ದೂರುಗಳ ತ್ವರಿತ ಪರಿಹಾರ ಹಾಗೂ ಗುಣಮಟ್ಟದ ಸೇವೆ ಒದಗಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದರು. ಅಲ್ಲದೆ, ಆಧಾರ್ ಸೇವಾ […]

ಮತ್ತಷ್ಟು ಓದಿ..

ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್! ಬೆಳಗಾವಿ ಸೇರಿ 7 ಕಡೆ ಅಧಿಕಾರಿಗಳ ಸರಣಿ ದಾಳಿ! ದಾಳಿ ಕುರಿತು ಸತೀಶ್ ಮೊದಲ ಪ್ರತಿಕ್ರಿಯೆ

ಬೆಳಗಾವಿ: ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ED) ಭಾರಿ ಶಾಕ್ ನೀಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಪತಿ (ಬಾಮೈದ) ಹಾಗೂ ಅಳಿಯನೂ ಆಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸಗಳು ಮತ್ತು ಕಚೇರಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಇಡಿ ಅಧಿಕಾರಿಗಳು ಬುಧವಾರ ಮುಂಜಾನೆಯಿಂದಲೇ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಬಳ್ಳಾರಿಯ ಮಾಜಿ ಸಂಸದ […]

ಮತ್ತಷ್ಟು ಓದಿ..

ಬೆಳಗಾವಿಯಲ್ಲಿ ‘ಕತ್ತಿ’ ವರ್ಸಸ್ ‘ಜಾರಕಿಹೊಳಿ’ ಟಾಕ್ ವಾರ್: ರಮೇಶ್ ಕತ್ತಿಗೆ ರಾಜಕೀಯ ಪಾಠ ಮಾಡಿದ ಸತೀಶ್!

ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣದಲ್ಲಿ ಸದಾ ಒಂದಿಲ್ಲೊಂದು ರಾಜಕೀಯ ಸಂಚಲನ ಸೃಷ್ಟಿಯಾಗುತ್ತಲೇ ಇರುತ್ತದೆ. ಇದೀಗ ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವೆ ಭಾರಿ ವಾಕ್ಸಮರ ಶುರುವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಿಚ್ಚು ಈಗಿನಿಂದಲೇ ಹೊತ್ತಿಕೊಂಡಿದೆ. ಮಾಜಿ ಸಂಸದ ರಮೇಶ್ ಕತ್ತಿ ಅವರ ಬಹಿರಂಗ ಸವಾಲಿಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಸೈಲೆಂಟ್ ಶೈಲಿಯಲ್ಲಿ ಮಾತಿನಲ್ಲೇ ತಿವಿಯುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ. ರಮೇಶ್ ಕತ್ತಿ ಹಾಕಿದ್ದ ಸವಾಲೇನು? ಇತ್ತೀಚೆಗೆ ಹುಕ್ಕೇರಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ […]

ಮತ್ತಷ್ಟು ಓದಿ..

ಕರ್ನಾಟಕದಾದ್ಯಂತ ನೀಟ್ ಮರು ಪರೀಕ್ಷೆ; ಬೆಳಗಾವಿಯ ಪರೀಕ್ಷಾ ಕೇಂದ್ರಗಳಿಗೆ ಡಿಸಿ, ಕಮೀಷನರ್ ದಿಢೀರ್ ಭೇಟಿ, ಪರಿಶೀಲನೆ

ಬೆಳಗಾವಿ: ದೇಶಾದ್ಯಂತ ಇಂದು ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಮರು ಪರೀಕ್ಷೆ ನಡೆಯುತ್ತಿದ್ದು, ಕರ್ನಾಟಕದಲ್ಲೂ ಕಟ್ಟುನಿಟ್ಟಿನ ಭದ್ರತೆ ಮತ್ತು ವ್ಯವಸ್ಥೆಗಳ ನಡುವೆ ಪರೀಕ್ಷೆ ಆರಂಭವಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಇಂದು ವೈದ್ಯಕೀಯ ಸೀಟಿಗಾಗಿ ಭವಿಷ್ಯದ ಪರೀಕ್ಷೆ ಬರೆಯುತ್ತಿದ್ದಾರೆ. ​ಕರ್ನಾಟಕದಲ್ಲಿ ನೀಟ್ ಪರೀಕ್ಷೆಯ ಅಂಕಿ-ಅಂಶಗಳು ​ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಇರುವ ಕ್ರೇಜ್ ಈ ಬಾರಿಯೂ ಮುಂದುವರಿದಿದೆ. ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ […]

ಮತ್ತಷ್ಟು ಓದಿ..

ಸರ್ಕಾರಿ ಶಾಲಾ ಮಕ್ಕಳ ಕೈಗೆ ‘ಕೋಡಿಂಗ್-AI’ ಅಸ್ತ್ರ: ಬೆಳಗಾವಿಯಲ್ಲಿ ಚಾಣಕ್ಯ ಸಂಸ್ಥೆಯ ವಿಶಿಷ್ಟ ಉಪಕ್ರಮ!

ಬೆಳಗಾವಿ: ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ತಾಂತ್ರಿಕವಾಗಿ ಮುಂಚೂಣಿಯಲ್ಲಿರಬೇಕು ಎಂಬ ಉದಾತ್ತ ಉದ್ದೇಶದಿಂದ, ಬೆಳಗಾವಿಯ ರಾಮತೀರ್ಥ ನಗರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕೋಡಿಂಗ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.ಜೂನ್ 9ರಂದು ನಡೆದ ಈ ವಿಶೇಷ ಕಾರ್ಯಕ್ರಮವು ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ರಾಜಶೇಖರ್, ಬೋಧಕ ಸಿಬ್ಬಂದಿ ಹಾಗೂ ಬೆಳಗಾವಿಯ ಚಾಣಕ್ಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿತು. ಭವಿಷ್ಯದ ತಂತ್ರಜ್ಞಾನಕ್ಕೆ ಇಂದೇ ನಾಂದಿ ಜಾಗತಿಕ ಮಟ್ಟದಲ್ಲಿ […]

ಮತ್ತಷ್ಟು ಓದಿ..

ಭಾರೀ ಮಳೆಗೆ ಜಲಾವೃತಗೊಂಡ ಸವದತ್ತಿ ರಸ್ತೆಗಳು: ನಡುರಸ್ತೆಯಲ್ಲೇ ವಾಹನಗಳು ಲಾಕ್

ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಸವದತ್ತಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಇಡೀ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶವಾದ ಮಾರುಕಟ್ಟೆ ರಸ್ತೆ ಸಂಪೂರ್ಣವಾಗಿ ಕೆರೆಯಂತಾಗಿದ್ದು, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನಡುರಸ್ತೆಯಲ್ಲೇ ಸಿಲುಕಿದ ವಾಹನಗಳು ನಿರಂತರವಾಗಿ ಸುರಿದ ಮಳೆಯಿಂದಾಗಿ ಮಾರುಕಟ್ಟೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಪರಿಣಾಮವಾಗಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವಾರು ಆಟೋರಿಕ್ಷಾಗಳು ಮತ್ತು ದ್ವಿಚಕ್ರ ವಾಹನಗಳು ನೀರಿನ ರಭಸಕ್ಕೆ ನಡುರಸ್ತೆಯಲ್ಲೇ ಆಫ್ ಆಗಿ ಸಿಲುಕಿಕೊಂಡವು. ವಾಹನಗಳನ್ನು […]

ಮತ್ತಷ್ಟು ಓದಿ..

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಶಾಸಕ ಆಸೀಫ್ ಸೇಠ್

ಬೆಳಗಾವಿ: ಸಕಲ ಜೀವಿಗಳ ಜೀವನಾಡಿಯಾಗಿರುವ ಪರಿಸರವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಪ್ರಮುಖ ಕರ್ತವ್ಯವಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ ಹೇಳಿದರು. ಬೆಳಗಾವಿ ಉತ್ತರ ಕ್ಷೇತ್ರದ ನಂದಿನಿ ಮಾರ್ಗದಲ್ಲಿರುವ ವಾರ್ಡ್ ನಂಬರ್ 35 ಗಾಜಿನ ಮನೆ ಆವರಣದಲ್ಲಿ ಮಹಾನಗರ ಪಾಲಿಕೆಯ ಯೋಜನೆಯಾಗಿರುವ “ಮಿಯಾವಾಕಿ” ಉದ್ಯಾನ ನಿರ್ಮಾಣಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ, ನಂತರ ನಡೆದ “ವಿಶ್ವ ಪರಿಸರ ದಿನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಪರಿಸರ ರಕ್ಷಣೆಗಾಗಿ ಅನುದಾನ […]

ಮತ್ತಷ್ಟು ಓದಿ..

‘ಅಹಿಂದ’ ನಾಯಕತ್ವದ ಮುಂದಿನ ವಾರಸುದಾರ: ಕರ್ನಾಟಕ ರಾಜಕಾರಣದ ಸದ್ದಿಲ್ಲದ ಸುಲ್ತಾನ್ ಸತೀಶ್ ಜಾರಕಿಹೊಳಿ!

ಬೆಂಗಳೂರು/ಬೆಳಗಾವಿ: ಕರ್ನಾಟಕ ರಾಜಕಾರಣದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರೆಂದರೆ ನೆನಪಾಗುವುದೇ ಜಾರಕಿಹೊಳಿ ಸಹೋದರರು. ಆದರೆ, ಉಳಿದ ಸಹೋದರರಿಗಿಂತ ವಿಭಿನ್ನವಾದ ವೈಚಾರಿಕ ಹಾದಿ, ಸದ್ದಿಲ್ಲದೆ ಜನಮನ ಗೆಲ್ಲುವ ಸಂಘಟನಾ ಚಾತುರ್ಯ ಹಾಗೂ ತತ್ವ ಸಿದ್ಧಾಂತಗಳ ಮೂಲಕವೇ ರಾಜ್ಯ ರಾಜಕಾರಣದಲ್ಲಿ ಧೀಮಂತ ನಾಯಕರಾಗಿ ಹೊರಹೊಮ್ಮಿದವರು ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ. ಸದ್ಯ ರಾಜ್ಯದ ಲೋಕೋಪಯೋಗಿ (PWD) ಸಚಿವರಾಗಿರುವ ಅವರು, ಕೇವಲ ಒಬ್ಬ ಸಚಿವರಾಗಿ ಅಷ್ಟೇ ಅಲ್ಲದೆ, ರಾಜ್ಯದ ಪ್ರಮುಖ ಸಮಾಜಮುಖಿ ಚಳವಳಿಯ ಮುಂಚೂಣಿ ನಾಯಕರಾಗಿ ಮುನ್ನಡೆಯುತ್ತಿದ್ದಾರೆ. ರಾಜಕೀಯ ಹೆಜ್ಜೆ ಗುರುತು: ಸಹಕಾರಿ […]

ಮತ್ತಷ್ಟು ಓದಿ..

ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು

ಬೆಳಗಾವಿ: ಬೆಂಡಿಗೇರಿ ಗ್ರಾಮದ ಹಲವಾರು ಪ್ರಮುಖ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಅಭಿವೃದ್ಧಿ ಪರ ಕೆಲಸಗಳನ್ನು ನೋಡಿ ಕಾಂಗ್ರೆಸ್ ಸೇರಲು ಬಯಸಿದ್ದಾಗಿ ತಿಳಿಸಿದರು. ಸಚಿವರು ಕಾಂಗ್ರೆಸ್ ಶಾಲು ಹಾಕಿ ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು. ​

ಮತ್ತಷ್ಟು ಓದಿ..