ಮುನವಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಸಿಎಂಗೆ ಮನವಿ

Letest Post ಬೆಳಗಾವಿ

ಬೆಳಗಾವಿ: ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಸಿಎಂ‌ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಹಲವಾರು ವರ್ಷಗಳಿಂದ ರೈತ ಮುಖಂಡರು, ಹಲವಾರು ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದರೂ ಕೂಡ ಈ ವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಇನ್ನು ಮುನವಳ್ಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಮುನವಳ್ಳಿಯು ಮಧ್ಯ ಭಾಗದಲ್ಲಿರುವುದರಿಂದ ಮುನವಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ  ಶ್ರೀಮುರುಗೇಂದ್ರ ಸ್ವಾಮಿಗಳು, ಬೈಲಹೊಂಗಲದ ಸ್ವಾಮಿಗಳು ಹಾಗೂ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ನಡೆಸಿ, ಮನವಿ ಸಲ್ಲಿಸಿದರು.

ಈ ವೇಳೆ ಮುನವಳ್ಳಿ ಪಟ್ಟಣದ ಮುಖಂಡರಾದಂತ ಪಂಚನಗೌಡ್ ದ್ಯಾಮನಗೌಡ, ಉಮೇಶ್ ಬಾಳಿ, ಚಂದ್ರು ಮುಚ್ಚಂಡಿ, ಕಲ್ಲಪ್ಪ ನಲವಡೆ, ಪರಶುರಾಮ್ ಗಂಟಿ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *