ಬೆಳಗಾವಿ: ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದಲ್ಲಿರುವ ಕೇದಾರ ಪೀಠದ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಕೆಲ ದಿನಗಳಿಂದ ಸ್ವಾಮಿಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ವಾಮೀಜಿ ನಿಧನಕ್ಕೆ ಹಲವು ಮಠಾದೀಶರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸ್ವಾಮಿಜಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಮುತ್ನಾಳ ಗ್ರಾಮದ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ನೋವು ತಂದಿದೆ. ಪೂಜ್ಯರ ಅಗಲಿಕೆ ಕೇವಲ ಮುತ್ನಾಳ ಗ್ರಾಮಕ್ಕೆ ಮಾತ್ರವಲ್ಲದೆ, ಸಮಸ್ತ ಭಕ್ತ ಸಮೂಹಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಧಾರ್ಮಿಕ, ಹಾಗೂ ಸಾಮಾಜಿಕ ಸೇವೆಗಳು ಸರ್ವಕಾಲಕ್ಕೂ ಸ್ಮರಣೀಯ. ಶ್ರೀಗಳ ತತ್ವ- ಸಿದ್ಧಾಂತಗಳು, ಧರ್ಮಸಭೆಗಳು, ಸರಳ ಜೀವನ ಮತ್ತು ಕಿರು ಪ್ರವಚನಗಳು ಸಾವಿರಾರು ಜನರಿಗೆ ದಾರಿದೀಪವಾಗಿದ್ದವು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅಪಾರ ಭಕ್ತ ಸಮೂಹಕ್ಕೆ ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಂತಾಪ
ಮುತ್ನಾಳ ಗ್ರಾಮದ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯ ಬಳಿ ತೆರಳಿ, ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದೆ. ಪೂಜ್ಯರ ಅಗಲಿಕೆ ಭಕ್ತ ಸಮೂಹಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಧಾರ್ಮಿಕ–ಸಾಮಾಜಿಕ ಸೇವೆಗಳು ಸದಾ ಸ್ಮರಣೀಯ. ಭಗವಂತ ಶ್ರೀಗಳ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಭಕ್ತರಿಗೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.


