ಪತ್ರಕರ್ತರ ಸೋಗಿನಲ್ಲಿ ಸುಲಿಗೆಗಿಳಿದಿದ್ದ ನಾಲ್ವರು ಯೂಟ್ಯೂಬರ್‌ಗಳ ಹೆಡೆಮುರಿ ಕಟ್ಟಿದ ಹುಕ್ಕೇರಿ ಪೊಲೀಸರು!
ಬೆಳಗಾವಿ: ಮಾಧ್ಯಮ ಕ್ಷೇತ್ರದ ಹೆಸರು ದುರ್ಬಳಕೆ ಮಾಡಿಕೊಂಡು, ಗಾಂಜಾ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ‘ಯೂಟ್ಯೂಬ್’ ಪತ್ರಕರ್ತರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ವಸೂಲಿಯನ್ನೇ ತಮ್ಮ ಮುಖ್ಯ ಕಾಯಕವಾಗಿಸಿಕೊಂಡಿದ್ದ ಈ ಖದೀಮರ ಜಾಲವನ್ನು ಜಾಲಾಡಿದ ಹುಕ್ಕೇರಿ ಪೊಲೀಸರು, ಸದ್ಯ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆಯ ಹಿನ್ನೆಲೆ ಏನು? ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಗ್ರಾಮದ ನಿವಾಸಿ ಮೆಹಬೂಬ್ ಜಮಾದಾರ್ ಎಂಬುವವರನ್ನು ಗುರಿಯಾಗಿಸಿಕೊಂಡಿದ್ದ ಈ […]
ಮತ್ತಷ್ಟು ಓದಿ..
