ಬೆಳಗಾವಿ ಜಿಲ್ಲಾ ಪೊಲೀಸರ ಬಿಗ್ ಸಕ್ಸಸ್: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 12 ಜನರನ್ನು ಪತ್ತೆ ಹಚ್ಚಿದ ‘ಎಐ’ ತಂತ್ರಜ್ಞಾನ!

ಬೆಳಗಾವಿ: ಕಾಲ ಬದಲಾದಂತೆ ಅಪರಾಧ ಜಗತ್ತನ್ನು ಮಟ್ಟಹಾಕಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂಬಂತೆ, ಬೆಳಗಾವಿ ಜಿಲ್ಲಾ ಪೊಲೀಸರು ವಿನೂತನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಿಕೊಂಡು ದಶಕದ ಹಿಂದೆ ನಾಪತ್ತೆಯಾಗಿದ್ದ ಬರೋಬ್ಬರಿ 12 ಜನರನ್ನು ಪತ್ತೆ ಹಚ್ಚಿ, ಅವರ ಕುಟುಂಬದೊಂದಿಗೆ ಮರುಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ನ್ಯಾಟ್‌ಗ್ರೇಡ್’ ಅಪ್ಲಿಕೇಶನ್ ಚಮತ್ಕಾರ: ಕಾಣೆಯಾದವರನ್ನು ಹುಡುಕಲು ಪೊಲೀಸರು ಈ ಬಾರಿ ಬಳಸಿದ್ದು ನ್ಯಾಟ್‌ಗ್ರೇಡ್ (NATGRID) ಎಂಬ ಅತ್ಯಾಧುನಿಕ ಎಐ ಅಪ್ಲಿಕೇಶನ್. ಈ ತಂತ್ರಜ್ಞಾನದ […]

ಮತ್ತಷ್ಟು ಓದಿ..

ನಾಲ್ಕನೇಯದು ಹೆಣ್ಣೆಂದು ಕತ್ತು ಹಿಸುಕಿ ಮೂರು ದಿನದ ಹಸುಳೆಯನ್ನ ಕೊಲೆಗೈದ ಪಾಪಿತಾಯಿ: ರಾಮದುರ್ಗ ಪೊಲೀಸರಿಂದ ಕೊಲೆಗಡುಕಿ ಬಂಧನ

ಬೆಳಗಾವಿ: ಬೆಳಗಾವಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಮೂರು ದಿನದ ಹೆಣ್ಣು ಕಂದಮ್ಮನನ್ನ ಕತ್ತುಹಿಸಿಕಿ ಕೊಲೆ ಮಾಡಲಾಗಿದೆ. ಹೆತ್ತವಳೇ ಕಂದಮ್ಮಳನ್ನ ಕೊಂದಿದ್ದು ಪಾಪಿ ಕೊಲೆಗಾರ್ತಿ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಲಿದ್ದಾರೆ. ಗಡಿಜಿಲ್ಲೆ ಬೆಳಗಾವಿಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ, ಎಂಥವರ ಎದೆಯೂ ಝಲ್ ಎನ್ನಿಸುವಂತಹ ಹೃದಯವಿದ್ರಾವಕ ಘಟನೆ ನಡೆದಿದೆ. ನೀವು ಹೀಗೆ ಮೇಲೆ ನೋಡಿರೋ ಪೋಟೋ ನವಜಾತ ಹೆಣ್ಣು ಶಿಶುವಿನದ್ದು. ಕಳೆದ ಮೂರು ದಿನಗಳ ಹಿಂದೆಯಷ್ಟೇ ತಾಯಿ‌ ಗರ್ಭದಿಂದ ಜನ್ಮ ಪಡೆದಿದ್ದ ಹಸುಗುಸಿನ ಕೊಲೆಯಾಗಿದ್ದು, […]

ಮತ್ತಷ್ಟು ಓದಿ..

ಪಾಲಕರು ಎಷ್ಟೇ ಬ್ಯುಸಿ ಇದ್ದರೂ ಮಕ್ಕಳ ಚಟುವಟಿಕೆ ಮೇಲೆ ಗಮನ ಇಡಬೇಕು: ಎಸ್ಪಿ ಡಾ.ಭೀಮಾಶಂಕರ ಗುಳೇದ

ಬೆಳಗಾವಿ: ಜೈನ್ ಹೆರಿಟೇಜ್ ಸ್ಕೂಲ್ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಒತ್ತು ನೀಡುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ. ಶುಕ್ರವಾರ ಸಂಜೆ, ರಾಣಿ ಚನ್ನಮ್ಮ ನಗರದ ಜೈನ್ ಹೆರಿಟೇಜ್ ಸ್ಕೂಲ್ ನ 15ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಒತ್ತು ಕೊಟ್ಟು ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇದು ಅಗತ್ಯ ಎಂದು ಅವರು ಹೇಳಿದರು. […]

ಮತ್ತಷ್ಟು ಓದಿ..