ಕೇರಳ: ಮಂಡ್ಯದಿಂದ ಅಯ್ಯಪ್ಪ ಮಾಲಾಧಾರಿಗಳನ್ನು ಹೊತ್ತು ಶಬರಿಮಲೇಗೆ ತರಳುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಅಯ್ಯಪ್ಪ ಮಾಲಾಧಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
33 ಅಯ್ಯಪ್ಪ ಮಾಲಧಾರಿಗಳು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದದಿಂದ ಶಬರಿಮಲೇಗೆ ತರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೇರಳದ ಏರಿಮಲೈ ತಟ್ಟಿಪಿಟ್ಟಮ್ ಪ್ರದೇಶದಲ್ಲಿ ಬಸ್ ಪಲ್ಟಿಯಾಗಿದೆ.
K.R.ಪೇಟೆ ತಾಲೂಕಿನ ಯಾತ್ರಾರ್ಥಿಗಳ ವಾಹನ ಪಲ್ಟಿಯಾದ ಹಿನ್ನಲೆ ವಿಷಯ ತಿಳಿದ ತಕ್ಷಣವೇ ಗಾಯಾಳುಗಳನ್ನು ಪೋನ್ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದ ಸ್ಥಳೀಯ ಶಾಸಕ ಹೆಚ್.ಟಿ.ಮಂಜು ಯಾವುದೇ ಸಹಾಯ ಬೇಕಿದ್ರೂ ತನನ್ನು ಸಂಪರ್ಕಿಸಿ ಎಂದು ಧೈರ್ಯ ತುಂಬಿದ್ದಾರೆ.

ಗಾಯಾಳುಗಳ ಆರೋಗ್ಯ ವಿಚಾರಿಸಿ ಅವಶ್ಯಕತೆ ಇದ್ದರೆ ಸ್ಥಳೀಯ ಅಧಿಕಾರಿಗಳ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ನಿನ್ನೆ ಸಂಜೆ ಕೇರಳದ ತಟ್ಟಿಪಿಟ್ಟಮ್ ಬಳಿ K.R ಪೇಟೆ ತಾಲೂಕಿನ ಯಲಾದಹಳ್ಳಿ ಗ್ರಾಮದ ಅಯ್ಯಪ್ಪ ಭಕ್ತರ ವಾಹನ ಪಲ್ಟಿಯಾಗಿತ್ತು. ಈ ಸಂಬಂಧ ಏರಿಮಲೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.


