
ಲಾರಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ಐವರನ್ನು ಬಂಧಿಸಿದ ಗ್ರಾಮೀಣ ಪೊಲೀಸರು
ಹುಬ್ಬಳ್ಳಿ: ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ ಲಾರಿ ಡ್ರೈವರ್‌ನ ತಡೆದ ಯುವಕರ ಗುಂಪೂಂದು, ಆತನಿಗೆ ಹಿಗ್ಗಾ ಮುಗ್ಗಾ ತಳಿಸಿದ ಪರಿಣಾಮ ಡ್ರೈವರ್ ನ ಸ್ಥಿತಿ ಗಂಭೀರವಾಗಿದ್ದು, ಆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಗಾಂಧಿ ಕಟ್ಟಿ ಬಳಿ 26-11-25 ರಂದು, ತಡರಾತ್ರಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿ ಹೊಡೆದು ಲಾರಿ ನಿಲ್ಲಿಸದೇ ಅಲ್ಲಿಂದ ಡ್ರೈವರ್ ಲಾರಿ ಸಮೇತ ಎಸ್ಕೇಪ್ ಆಗಿದ್ದು, ಅದನ್ನು ಕಂಡ ಕುಸುಗಲ್ ಗ್ರಾಮದ ಯುವಕರು ಡ್ರೈವರ್‌ನ ಬೆನ್ನತ್ತಿ, ಕುಸುಗಲ್ ರಸ್ತೆಯಲ್ಲಿರುವ ದಿ.ಪಾರ್ಕ್ ಹೊಟೆಲ್ ಪಕ್ಕದಲ್ಲಿ ಲಾರಿ ನಿಲ್ಲಿಸಿ ಡ್ರೈವರ್ ದೇವೆಂದ್ರಪ್ಪಗೆ ಹಿಗ್ಗಾಮುಗ್ಗಾ ತಳಿಸಿದಲ್ಲದೇ ಕಲ್ಲಿನಿಂದ ಮುಖಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಡ್ರೈವರ್ ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು ಆತನ ಸ್ಥಿತಿ ಚಿಂತಜನಕವಾಗಿದೆ. ಈ ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಮುರುಗೇಶ ಚೆನ್ನಣ್ಣವರ, ಹಲ್ಲೆ ಮಾಡಿದ ಆರೋಪಿಗಳಾದ ಬಸವರಾಜ ಸಿದ್ದಪ್ಪ ಕಟ್ಟಮನಿ, ಭರತ್ ಬೀಮರೆಡ್ಡಿಯವರ, ಕೃಷ್ಣ ಬೀಮರೆಡ್ಡಿಯವರ, ಶರೀಪ್ ನದಾಪ್, ಹುಸೇನ ನದಾಪ ಸೇರಿ ಐವರು ಆರೋಪಗಳನ್ನು ಬಂಧನ ಮಾಡಿದ್ದಾರೆ.
ಇನ್ನು ಹಲ್ಲೆ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಇನ್ನೂ ಯಾರ‌್ಯಾರು ಇದ್ರೂ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದು, ಅವರ ವಿರುದ್ಧ ಸಹ ಕ್ರಮ ಕೈಗೊಳ್ಳುವ ಭರವಸೆ ನೀಡದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
