ಮಂಡ್ಯ ಭೂವರಾಹನಾಥ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ದಂಪತಿ: ತಿಹಾರ ಜೈಲು ನೆನೆದ ಡಿಸಿಎಂ

Letest Post ರಾಜ್ಯ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ಮಂಡ್ಯ ಜಿಲ್ಲೆಯ ಸುಪ್ರಸಿದ್ಧ ಭೂವರಾಹನಾಥ ದೇವಾಲಯಕ್ಕೆ ದಂಪತಿ ಸಮೇತ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದ ಡಿಕೆಶಿ ಭೂವರಾಹನಾಥ ದೇವಾಲಯದ ಹಿನ್ನೆಲೆ ಮತ್ತು ತಮ್ಮ ವೈಯಕ್ತಿಕ ಅನುಭವಗಳನ್ನು ಮೆಲುಕು ಹಾಕಿದ್ರು.

ಭೂವರಾಹನಾಥ ದೇವಾಲಯಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ದಂಪತಿ ವಿವಿಧ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಪೂಜೆಯ ಭಾಗವಾಗಿ ಹೋಮ ಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದ ಡಿಕೆಶಿ ದಂಪತಿ, ಅದಾದ ನಂತರ ಅಭಿಷೇಕ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಡೆಯುತ್ತಿದ್ದಾಗಲೇ ಪ್ರಸಾದ ಸ್ವೀಕರಿಸಿದ ಡಿಕೆಶಿ ದಂಪತಿ, ನಂತರ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನದ ಇತಿಹಾಸ ಬಗ್ಗೆ ಅರ್ಚಕರಿಂದ ಮಾಹಿತಿ ಪಡೆದರು.

ತಿಹಾರ್ ಜೈಲು ನೆನಪಿಸಿಕೊಂಡ ಡಿಕೆಶಿ:

ವಿಶೇಷ ಪೂಜೆ ಪ್ರಾರ್ಥನೆ ಬಳಿಕ ದೇಗುಲದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭೂವರಹನಾಥ ದೇವಾಲಯದ ಮಹತ್ವವನ್ನು ವಿವರಿಸಿದರು. ಅಲ್ಲದೇ ನಾನು ತಿಹಾರ್ ಜೈಲಿನಲ್ಲಿದ್ದಾಗ, ನಮ್ಮ ಅತ್ತೆ, ಮಾವ ಈ ದೇವಾಲಯಕ್ಕೆ ನಾಲ್ಕು ಬಾರಿ ಬಂದು ಪ್ರಾರ್ಥನೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ಬೇರೆ ಪಕ್ಷದ ಶಾಸಕರೊಬ್ಬರು ಇಲ್ಲಿಗೆ ಹೋಗುವಂತೆ ಒತ್ತಾಯ ಮಾಡುತ್ತಿದ್ದರು. ಇಲ್ಲಿಗೆ ಬಂದು ನೋಡಿದಾಗ ಇದರ ಮಹಿಮೆ ಅರ್ಥವಾಯಿತು. ಇದು ಅದ್ಭುತ, ಐತಿಹಾಸಿಕ ದೇವಾಲಯ, ಎಂದು ಭಾವುಕರಾದರು.

Leave a Reply

Your email address will not be published. Required fields are marked *