ನಾನು ಯಾವ ಬಣವೂ ಅಲ್ಲಾ, ಸಿಎಂ – ಡಿಸಿಎಂ ಇಬ್ಬರೂ ನಮ್ಮವರೆ: ಯೋಗಿಶ್ವರ್

Letest Post ರಾಜಕೀಯ

ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಬೆಂಗಳೂರು ‌ದಕ್ಷಿಣ ಜಿಲ್ಲೆ ಚನ್ನಪಟ್ಟಣದಲ್ಲಿ ‌ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಸಿಎಂ, ಡಿಸಿಎಂ ಇಬ್ಬರು ನಮ್ಮವರು. ಕ್ಷೇತ್ರದ ಅಭಿವೃದ್ಧಿ ‌ವಿಚಾರವಾಗಿ ಸಿಎಂ, ಡಿಸಿಎಂ ಅವರನ್ನ ಭೇಟಿಯಾಗಿದ್ದೆ. ಇಂದು ಸಹಾ ಸಿಎಂ ಬಳಿ ಚರ್ಚೆ ಮಾಡಿ ಬಂದಿದಿನಿ. ಆದರೆ ರಾಜಕಾರಣ ಚರ್ಚೆ ಮಾಡಿಲ್ಲ ಎಂದಿದ್ದಾರೆ.

ನಾನು ಯಾವ ಬಣನೂ ಅಲ್ಲ. ನಾನು ಕಾಂಗ್ರೆಸ್ ನಲ್ಲಿ ‌ಒಂದು ವರ್ಷದ ಮಗು ಎಂದಿರುವ ಯೋಗಿಶ್ವರ್, ಕೆಲ ಶಾಸಕರು ದೆಹಲಿಗೆ ಹೋಗಿರುವ ವಿಚಾರ ತನಗೆ ಗೊತ್ತಿಲ್ಲ ಎಂದ್ರು. ನಮ್ಮನ್ನ ಯಾಕೆ ಕಾಂಟ್ರವರ್ಸಿ ಮಾಡುತ್ತಿರಾ ಎಂದು ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ ಅವರು ಸಿಎಂ ಬದಲಾವಣೆ ವಿಚಾರವನ್ನ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನನ್ನನ್ನ ಚರ್ಚೆಯ ವಸ್ತು ಯಾಕೆ ಮಾಡುತ್ತಿರಾ ಎಂದು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ರು.

ಇನ್ನು ನಮ್ಮ ಜಿಲ್ಲೆಯಿಂದ ಮಂತ್ರಿ ಕೊಟ್ರೆ ಬಾಲಕೃಷ್ಣ ಅವರಿಗೆ ಕೊಡಿ ಎಂದಿದ್ದೇವೆ. ಎಲ್ಲವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಗೆಹರಿಸುತ್ತಾರೆ. ಎಲ್ಲ ಪಕ್ಷದಲ್ಲೂ ಗೊಂದಲ ಇರುತ್ತದೆ. ಎಲ್ಲವನ್ನೂ ನಾವು ಮಾಧ್ಯಮಗಳ ಮುಂದೆ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ತೀರ್ಮಾನಕ್ಕೆ ನಾವು ಬದ್ದ ಎಂದಿದ್ದಾರೆ.

Leave a Reply

Your email address will not be published. Required fields are marked *