ಆನೆ ದಾಳಿ 70 ವರ್ಷದ ವೃದ್ದ ಸಾವು

Letest Post ಚಾಮರಾಜನಗರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ‌ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಲ್ಲಿಕತ್ರಿ ಗ್ರಾಮದಲ್ಲಿ  ಆನೆ ದಾಳಿಗೆ ವೃದ್ದ ಬಲಿಯಾಗಿದ್ದಾನೆ. ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊಂಬೆಗಲ್ಲು ಪೋಡಿನ ಹಿರಿಯ ಮುಖಂಡ ಶಿಕಾರಿ ಕೇತೇಗೌಡ (70) ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ.

ಘಟನೆ ವಿವರ: ಪಿ.ಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಂಬೆಗಲ್ಲು ಪೋಡಿನ ಹಿರಿಯ ಮುಖಂಡ ಶಿಕಾರಿ ಕೇತೇಗೌಡ ಕೆಲಸ ನಿಮಿತ್ತ ತಮ್ಮ ದ್ವಿಚಕ್ರ ವಾಹನದಲ್ಲಿ ಒಡೆಯರಪಾಳ್ಯ ಗ್ರಾಮಕ್ಕೆ ಬರುತ್ತಿರುವಾಗ ಬೈಲೂರು ಅರಣ್ಯ ಪ್ರದೇಶದಲ್ಲಿ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪ್ರಮೋದ್ ಸೇರಿದಂತೆ
ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಘಟನೆ ನಡೆದಂತಹ ಕೆಲ ದೂರದಲ್ಲಿ ಆನೆ ಒಂದೆಡೆ ನಿಂತಿರುವ
ಬಗ್ಗೆ ಅರಿತು ಆನೆಯನ್ನು ಕೂಡ ಕಾಡಿಗೆ ಓಡಿಸುವಲ್ಲಿ ಸಫಲರಾಗಿದ್ದಾರೆ.

Leave a Reply

Your email address will not be published. Required fields are marked *