ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ, ಇವರು ಇಂದು ನೈರುತ್ಯ ವಲಯದ ಮಹಾ ಪ್ರಬಂಧಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರೇಲ್ವೆ ಇಲಾಖೆ ಕಾಮಗಾರಿಗಳ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು.

1) ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ:
ಪ್ರಸ್ತಾಪಿತ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಲಾಗಿ ಕಾಮಗಾರಿ ಪ್ರಾರಂಭಕ್ಕೆ ಅವಶ್ಯವೆನಿಸಿದ ಭೂ ಸಮೀಕ್ಷೆ ಬೆಳಗಾವಿ – ಕಿತ್ತೂರು – ಧಾರವಾಡದ ಮಾರ್ಗದಲ್ಲಿ (ಧಾರವಾಡ ಹತ್ತಿರದ ಸುಮಾರು 16 ಎಕರೆ ಜಮೀನು ಮಾತ್ರ ಹೊರತು ಪಡಿಸಿ) ಪೂರ್ಣಗೊಂಡಿದ್ದು, ರಾಜ್ಯ ಸರಕಾರದಿಂದ ಭೂ ಹಸ್ತಾಂತರಗೊಂಡ ನಂತರ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಕರೆದು ಶೀಘ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಯಿತು.
ಸಂಸದರು ರಾಜ್ಯ ಸರಕಾರದಿಂದ ರೇಲ್ವೆ ವಲಯಕ್ಕೆ ಶೀಘ್ರ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಧಿಕಾರಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
2) ಲೋಕಾಪೂರ – ರಾಮದುರ್ಗ – ಸವದತ್ತಿ – ಧಾರವಾಡ:
ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅವಶ್ಯವೆನೆಸಿದ “ಪೂರ್ವ ಸಮೀಕ್ಷೆ ಕಾರ್ಯ” ಕೈಕೊಳ್ಳುವ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಸಂಸದರು ವಿಚಾರಿಸಲಾಗಿ, ಇದಕ್ಕೆ ಅಗತ್ಯ ಅನುಮೊದನೆ ಕೇಳಿ ಈಗಾಗಲೇ ರೇಲ್ವೆ ಬೋರ್ಡಗೆ ಪತ್ರ ಬರೆದಿರುವ ಬಗ್ಗೆ ರೇಲ್ವೆ ಅಭಿಯಂತರರು ತಿಳಿಸಿದರು.
ಪ್ರಸ್ತಾಪಿತ ಮಾರ್ಗ ನಿರ್ಮಾಣವಾದಲ್ಲಿ ರಾಮದುರ್ಗದ ಶ್ರೀ ಶಬರಿ ಮಾತೆ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮದೇವಿ, ಶಿರಸಂಗಿಯ ಶ್ರೀ ಕಾಳಿಕಾದೇವಿ ದೇವಸ್ಥಾನಗಳಿಗೆ ಭೇಟಿ ನೀಡಲು ಕೋಟ್ಯಾಂತರ ಜನರಿಗೆ ಪ್ರತಿ ವರ್ಷ ಅನುಕೂಲಕರವಾಗಲಿದೆ ಎಂದು ಸಂಸದರು ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿ, ಈ ಬಗ್ಗೆ ರೇಲ್ವೆ ಬೋರ್ಡನಿಂದ ಅನುಮೋದನೆ ಪಡೆಯಲು, ನಿರಂತರ ಸಂಪರ್ಕದಲ್ಲಿ ಇರುವಂತೆ ಅಗತ್ಯ ಶ್ರಮವನ್ನು ವಹಿಸಿಲು ಸೂಚಿಸಿದರು.

3)ಬೆಳಗಾವಿ ನಗರ ಲೆವೆಲ್ ಕ್ರಾಸಿಂಗ್ ನಂ: 381 ಹತ್ತಿರ ಎರಡನೆಯ ಲೈನ್ ಪ್ರಾರಂಭಕೆ ಇರುವ ತೊಂದರೆಗಳ ಬಗ್ಗೆ ಸಂಸದರು ಮಾಹಿತಿಯನ್ನು ಪಡೆಯಲಾಗಿ, ಇದಕ್ಕೆ ಅಗತ್ಯವೆನೆಸಿದ ವಾಹನಗಳ ಓಡಾಟದ ಮಾರ್ಗ ಬದಲಾವಣೆಗೆ ಅವಶ್ಯವಾದ ಪರವಾನಿಗೆಯನ್ನು ಪೋಲಿಸ್ ಇಲಾಖೆಯಿಂದ ಪಡೆಯಲು ಸೂಚಿಸುತ್ತಾ, ಈ ಕಾಮಗಾರಿ ಶೀಘ್ರ ಪ್ರಾರಂಭಕ್ಕೆ ರೇಲ್ವೆ ಮಹಾ ಪ್ರಬಂಧಕರು ಸ್ಥಳಕ್ಕೆ ಭೇಟಿ ನೀಡಲು ತಿಳಿಸಿದರು. ಯಾವುದೇ ಕಾರಣಕ್ಕೂ ಇದನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು.
4) ಬೆಳಗಾವಿ ರೇಲ್ವೆ ನಿಲ್ದಾಣ ಅಭಿವೃದ್ಧಿಗಾಗಿ “ಪ್ರಧಾನ ಮಂತ್ರಿ ಅಮ್ರತ ಸ್ಟೇಶನ್ ಯೋಜನೆಯಡಿ” ಆಯ್ಕೆಯಾಗಿದ್ದು, ಆದರೆ ಇಲ್ಲಿ ನಡೆಯುವ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ, ಈ ನಿಟ್ಟಿನಲ್ಲಿ ಅಲ್ಲಿ ನಡೆಯುತ್ತಿರುವ ಲಿಫ್ಟ್, ಎಲಿವೇಟರ್, ಫುಟ್ ಓವರ್ ಬ್ರಿಡ್ಜ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಯಿತು. ಅದರಂತೆ ಘಟಪ್ರಭಾ ರೇಲ್ವೆ ನಿಲ್ದಾಣದಲ್ಲಿಯೂ ಸಹ ಫುಟ್ ಓವರ್ ಬ್ರಿಡ್ಜ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಂಸದರು ಸೂಚಿಸಿದರು.
5) ಬೆಳಗಾವಿ – ಮಣಗೂರ, ಬೆಳಗಾವಿ ಮಡಗಾಂವ – ಉಡುಪಿ – ಮಂಗಳೂರು, ಬೆಳಗಾವಿ ಚೆನೈ (ತಿರುಪತಿ ಮಾರ್ಗವಾಗಿ)ನೂತನ ರೈಲು ಪ್ರಾರಂಭಕ್ಕೆ ಸೇರಿದಂತೆ, ಬೆಳಗಾವಿ – ಬೆಂಗಳೂರು ವಂದೇ ಭಾರತ ರೈಲು ಸಂಚಾರವನ್ನು ಬೆಳಗಾವಿಯಿಂದ ಬೆಳ್ಳಿಗ್ಗೆ : 06:00 ಗಂಟೆಗೆ ನಿರ್ಗಮಿಸುವಂತೆ ಹಾಗೂ ಹುಬ್ಬಳ್ಳಿ – ಬೆಳಗಾವಿ – ಪೂಣೆ ನಡುವಿನ ವಂದೇ ಭಾರತ ರೈಲು ವಾರದಲ್ಲಿ ಮೂರು ದಿನ ಪ್ರವಾಸದ ಬದಲು ವಾರದ ಎಲ್ಲ ದಿನ ಸಂಚರಿಸುವಂತೆ ನೋಡಿಕೊಳ್ಳುವಂತೆ ಬೆಳಗಾವಿ ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ ಸಭೆಯಲ್ಲಿ ರೇಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ನೂತನ ಸದಸ್ಯರು, ಶ್ರೀ ಪ್ರಮೋದ ಜೋಶಿ, ಶ್ರೀ ಚಿದಾನಂದ ಧೀಮಶೆಟ್ಟಿ, ಶ್ರೀ ಗುರುಪಾದ ಕಳ್ಳಿ, ಶ್ರೀ ಈರಣ್ಣ ಚಂದರಗಿ ಹಾಗೂ ನೈರುತ್ಯ ರೇಲ್ವೆ ವಿಭಾಗದ ಮಹಾ ಪ್ರಬಂಧಕರಾದ ಶ್ರೀ ಮುಕುಲ್ ಸರನ ಮಾಥರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


