ಸುಕ್ಷೇತ್ರ ಕೊಣ್ಣೂರ-ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ

Letest Post ಬೆಳಗಾವಿ ರಾಜ್ಯ

ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷ ಕೂಡ ಲಿಂಗೈಕ್ಯ ಶ್ರೀಮದ್ ಜಗದ್ಗುರು ಶ್ರೀ ಘನಲಿಂಗ ಚಕ್ರವರ್ತಿ ಡಾ. ಶ್ರೀ ಅದೃಶ್ಯ ಗುರುಸಿದ್ದೇಶ್ವರ ಮಹಾಸ್ವಾಮಿಗಳವರ ಆಶೀರ್ವಾದದಿಂದ ಹಾಗೂ ಶ್ರೀ ಮ, ಘ, ಚ, ಡಾ. ಪವಾಡೇಶ್ವರ ಮಹಾಸ್ವಾಮಿಗಳವರ ದಿವ್ಯ ಸನ್ನಿದಿಯಲ್ಲಿ ವಿಜೃಂಭಣೆಯಿಂದ ಜರಗುವ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಕ್ಷೇತ್ರ ಕೊಣ್ಣೂರ ಮರಡಿಮಠದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕ ಮಹೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕದೆ.

ದಿನಾಂಕ 28-11-2025 ರಿಂದ 02-12-2025 ಒಟ್ಟು 5 ದಿನಗಳವರೆಗೆ ಅತೀ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ಹಾಗೂ ಕಾರ್ತಿಕ ಮಹೋತ್ಸವ ಜರುಗಲಿದೆ. ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳು ಸೇರಿದಂತೆ ಪಕ್ಕದ ಮಹಾರಾಷ್ಟ್ರ ರಾಜ್ಯದಿಂದಲೂ ಕೂಡ ಸಾವಿರಾರು ಭಕ್ತ ಸಮೂಹ ಪಾಲ್ಗೊಳ್ಳುತ್ತಿದ್ದು, 5 ದಿನಗಳ ಕಾಲ ಪ್ರತಿ ದಿನ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶುಕ್ರವಾರ 29 ರಂದು ಲಿಂಗೈಕ್ಯ ಶ್ರೀಮದ್ ಜಗದ್ಗುರು ಗಣಲಿಂಗ ಚಕ್ರವರ್ತಿ ಡಾ. ಶ್ರೀ ಅದೃಶ್ಯ ಗುರು ಸಿದ್ದೇಶ್ವರ ಮಹಾಸ್ವಾಮಿಗಳವರ ಮರಿ ಜಗದ್ಗುರುಗಳ ಗದ್ದುಗೆ , ಮಹಾರುದ್ರಾಭಿಷೇಕ ಜರುಗುವುದರ ಮೂಲಕ ಅದೇ ದಿನ ದೀಕ್ಷಾ ಕಾರ್ಯಕ್ರಮ ಹಾಗೂ ಆಯಾಚ್ಯಾರ ಕಾರ್ಯಕ್ರಮ ಜರುಗುವುದು. ಹಾಗೂ ಕೊಣ್ಣೂರಿನ ಶ್ರೀಮದ್ ಜಗದ್ಗುರು ಕಾಡಸಿದ್ದೇಶ್ವರ ಪಲ್ಲಕಿಯನ್ನು ಸಕಲ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳುವುದು.

ಜಾತ್ರೆಯಲ್ಲಿ ಜರಗುವ ವಿವಿಧ ಕಾರ್ಯಕ್ರಮಗಳ ವಿವರ

ಡಾ. ಅದೃಶ್ಯ ಶ್ರೀ ಅವಾರ್ಡ್ಸ್-2025

ಡಾ. ಅದೃಶ್ಯ ಶ್ರೀ ಅವಾರ್ಡ್ಸ್ ಎಂಬ ಸಮೂಹ ನೃತ್ಯ ಕಾರ್ಯಕ್ರಮದಿಂದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ,  ವಿದ್ಯಾರ್ಥಿನಿಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಬೆಳಗಾವಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಸಮೂಹ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನೃತ್ಯ ಸ್ಪರ್ಧೆಯು 3 ವಿಭಾಗಗಳಲ್ಲಿ ಆಯೋಜನೆ ಮಾಡಲಾಗಿದ್ದು ಪ್ರಾಥಮಿಕ, ಪ್ರೌಢಶಾಲೆ, ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜನೆ ಮಾಡಲಾಗಿದೆ.‌ ವಿಜಯಶಾಲಿಯಾದ ತಂಡಗಳಿಗೆ ನಗದು ಬಹುಮಾನ ಜೊತೆಗೆ ಪಾರಿತೋಷಕ ನೀಡಿ ಗೌರವಿಸಲಾಗುವುದು.

ಪ್ರತಿದಿನ ಜರಗುವ ಕಾರ್ಯಕ್ರಮಗಳ ವಿವರ

28-11-2025 ಶುಕ್ರವಾರ ಪ್ರಾಥಮಿಕ ವಿಭಾಗದ ನೃತ್ಯ ಸ್ಪರ್ಧೆಗಳ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 30,000 ಸಾವಿರ ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 20,000 ಸಾವಿರ ನಗದು ಬಹುಮಾನ ತೃತೀಯ ಸ್ಥಾನ ಪಡೆದ ತಂಡಕ್ಕೆ 10,000 ಸಾವಿರ ನಗದು ಬಹುಮಾನ ಹಾಗೂ ಚತುರ್ಥ ಬಹುಮಾನ ಪಡೆದ ತಂಡಕ್ಕೆ 5,000 ಸಾವಿರ ನಗದು ಬಹುಮಾನ ವಿತರಣೆ ಮಾಡಲಾಗಿದೆ.

ಇಂದು 29-11-2025 ಶನಿವಾರ ಮುಂಜಾನೆ 9 ಘಂಟೆಗೆ ಕುದುರೆ ಗಾಡಿ ಶರತ್ತುಗಳು ಹಾಗೂ ಸಂಜೆ 4 ಘಂಟೆಗೆ ಪುರುಷ ಮತ್ತು ಮಹಿಳಾ ಜಂಗಿ ಕುಸ್ತಿಗಳು ಜರಗುತ್ತವೆ. ಸಂಜೆ 6 ಘಂಟೆಗೆ ಪ್ರೌಢಶಾಲಾ ವಿಭಾಗದ ನೃತ್ಯ ಸ್ಪರ್ಧೆಗಳ ಆಯೋಜನೆ ಮಾಡಲಾಗಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 50.000 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30.000 ಸಾವಿರ ನಗದು ಬಹುಮಾನ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 20.000 ಸಾವಿರ ನಗದು ಬಹುಮಾನ ಹಾಗೂ ಚತುರ್ಥ ಸ್ಥಾನ ಪಡೆದ ತಂಡಕ್ಕೆ 10.000 ಸಾವಿರ ನಗದು ಬಹುಮಾನ ನೀಡಲಾಗುವುದು.

30-11-2025 ರವಿವಾರ ಸಂಜೆ 4 ಘಂಟೆಗೆ ಶ್ರೀಮದ್ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಭವ್ಯ ರಥೋತ್ಸವ ಹಾಗೂ ಸಂಜೆ 6 ಘಂಟೆಗೆ ಕಾಲೇಜು ವಿಭಾಗದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 50.000 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30.000 ಸಾವಿರ ನಗದು ಬಹುಮಾನ, ತೃತೀಯ ಸ್ಥಾನ ಪಡೆದ ತಂಡಕ್ಕೆ 20.000 ಸಾವಿರ ನಗದು ಬಹುಮಾನ ಹಾಗೂ ಚತುರ್ಥ ಸ್ಥಾನ ಪಡೆದ ತಂಡಕ್ಕೆ 10.000 ಸಾವಿರ ನಗದು ಬಹುಮಾನ ನೀಡುವುದರ ಜೊತೆಗೆ ನೃತ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.

ಇನ್ನು 01-12-2025 ಸೋಮವಾರ ರಾತ್ರಿ 8 ಘಂಟೆಗೆ ಕಾರ್ತಿಕೋತ್ಸವದ ಲಕ್ಷ ದೀಪೋತ್ಸವ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಕಲ ಭಕ್ತಾದಿಗಳು ಪಾಲ್ಗೊಳ್ಳುವರು. ಅದೇ ದಿನ ರಾತ್ರಿ 10 ಘಂಟೆಗೆ ಶ್ರೀ ಮಠದ ಆವರಣದಲ್ಲಿ ನೀತಿ ಪರವಾದ ವಿವಿಧ ಬೈಲಾಟಗಳು ಜರಗುವವು. ಸುಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ರೈಲು ಹಾಗೂ ಬಸ್ಸುಗಳ ಅನುಕೂಲವಿದ್ದು, ಜಾತ್ರಗೆ ಆಗಮಿಸುವರಿಗೆ ವಿಶೇಷ ಬಸ್ ಗಳ ಸೌಕರ್ಯವಿರುತ್ತದೆ.

Leave a Reply

Your email address will not be published. Required fields are marked *