ಸಿಎಂ ಖುರ್ಚಿ ಕಿತ್ತಾಟ ಸಚಿವ ಕೆ.ಹೆಚ್.ಮುನಿಯಪ್ಪ ಶಾಕಿಂಗ್ ಹೇಳಿಕೆ

Letest Post ರಾಜ್ಯ

ದೇವನಹಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಯಲ್ಲಿರುವಾಗಲೇ ಸಚಿವ ಕೆ.ಹೆಚ್.ಮುನಿಯಪ್ಪ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ದೇವನಹಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಮುನಿಯಪ್ಪ, ಪವರ್ ಶೇರಿಂಗ್ ವಿಚಾರ ಎಐಸಿಸಿ ಅಧ್ಯಕ್ಷರ ಬಳಿ ಈಗಾಗಲೇ ಮಾತನಾಡಿದ್ದಾರಂತೆ.

ಕೆಲ ದಿನಗಳ ಹಿಂದೆ ಸಚಿವ ಕೆ.ಹೆಚ್.ಮುನಿಯಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. ಮಾತುಕತೆ ಸಮಯದಲ್ಲಿ ಸಿಎಂ ಅವಧಿ ಬಗ್ಗೆ ಇಬ್ಬರ ನಡುವೆ ಚರ್ಚೆಯಾಗಿದ್ದು, ನೀವು ತಕ್ಷಣ ಏನಾದ್ರು ಒಂದು ತೀರ್ಮಾನ ಮಾಡಿ ಎಂದಿದ್ದೇನೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ಈ ಹಿಂದೆ ಏನಾದ್ರೂ ತೀರ್ಮಾನ ಆಗಿದ್ರೆ ಆ ತೀರ್ಮಾನದಂತೆ ನಡೆದುಕೊಳ್ಳಿ. ಈಗಾಗಲೇ ರಾಜ್ಯದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಗೊಂದಲಕ್ಕೆ ಅವಕಾಶ ಕೊಡಬೇಡಿ ಎಂದಿದ್ದಾರಂತೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ತೀರ್ಮಾನ ಆಗಿಲ್ಲ ಅಂದ್ರೆ, ಬಂದು ನಿಮ್ಮ ನಿರ್ಣಯದ ಬಗ್ಗೆ ಹೇಳಿ ಎಂದು ಖರ್ಗೆಯವರಿಗೆ ಮುನಿಯಪ್ಪ ಮನವಿ ಮಾಡಿದ್ದಾರಂತೆ.

ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟು ಯಶಸ್ವಿಯಾಗಿ ನಡೆಯುತ್ತಿದೆ. ಇದರ ಮಧ್ಯೆ ಈ ವಿಚಾರದಿಂದ ಗೊಂದಲ ಆಗೋದು ಬೇಡ ಎಂದಿದ್ದು, ಎರಡುವರೆ ವರ್ಷ ಆದ್ಮೇಲೆ ಈ ಗೊಂದಲ ಶುರುವಾಗಿದೆ. ಎಐಸಿಸಿ ಅವರು ಏನು ತೀರ್ಮಾನ ಕೊಟ್ಟಿದ್ದಾರೆ ಅದರ ಪ್ರಕಾರ ಅವರು ನಡೆದುಕೊಳ್ಳಬೇಕು ಎಂದಿರುವ ಮುನಿಯಪ್ಪ ಆದಷ್ಟು ಬೇಗ ಗೊಂದಲವನ್ನ ನಿಲ್ಲಿಸಬೇಕು ಎಂದು ಹೈಕಮಾಂಡ್ ಗೆ ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *