ಲಾರಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ಐವರನ್ನು ಬಂಧಿಸಿದ ಗ್ರಾಮೀಣ ಪೊಲೀಸರು

ಹುಬ್ಬಳ್ಳಿ: ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ ಲಾರಿ ಡ್ರೈವರ್‌ನ ತಡೆದ ಯುವಕರ ಗುಂಪೂಂದು, ಆತನಿಗೆ ಹಿಗ್ಗಾ ಮುಗ್ಗಾ ತಳಿಸಿದ ಪರಿಣಾಮ ಡ್ರೈವರ್ ನ ಸ್ಥಿತಿ ಗಂಭೀರವಾಗಿದ್ದು, ಆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಗಾಂಧಿ ಕಟ್ಟಿ ಬಳಿ 26-11-25 ರಂದು, ತಡರಾತ್ರಿ ರಸ್ತೆ ಬದಿ ನಿಂತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿ ಹೊಡೆದು ಲಾರಿ ನಿಲ್ಲಿಸದೇ ಅಲ್ಲಿಂದ ಡ್ರೈವರ್ ಲಾರಿ ಸಮೇತ ಎಸ್ಕೇಪ್ ಆಗಿದ್ದು,  ಅದನ್ನು ಕಂಡ […]

ಮತ್ತಷ್ಟು ಓದಿ..

ದಿನೇ ದಿನೇ ಬಿಗಡಾಯುಸುತ್ತಿದೆ ಸರ್ಕಾರಿ ಉದ್ಯೋಗದ ಸಮಸ್ಯೆ – ಸರ್ಕಾರ ನೀಡುವುದೇ ಭರವಸೆ?

‘ಕಣ್ಣು ಬಿಡು ಸರ್ಕಾರ’ ಧಾರವಾಡ: ಎಲ್ಲೆಡೆ ಉದ್ಯೋಗಾಕಾಂಕ್ಷಿಗಳ ಆಕ್ರೋಶ. ಮತ್ತೊಂದೆಡೆ ಸರ್ಕಾರಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುತ್ತಿಲ್ಲ ಎಂಬ ಉದ್ಯೋಗಾಕಾಂಕ್ಷಿಗಳ ಹತಾಶ ಭಾವನೆ. ಪೊಲೀಸ್ ಆಯುಕ್ತರ ಎದುರೇ ಕಣ್ಣೀರು ಹಾಕುತ್ತಿರುವ ಉದ್ಯೋಗಾಕಾಂಕ್ಷಿಗಳು. ಇದೆಲ್ಲ ಸದ್ಯದ ಉದ್ಯೋಗಾಕಾಂಕ್ಷಿಗಳ ಪರಿಸ್ಥಿತಿ. ಒಂದೆಡೆ ವಯಸ್ಸು ಮೀರುತ್ತಿದ್ದರೆ, ಮತ್ತೊಂದೆಡೆ ಸರ್ಕಾರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮೊಂಡುತನ ತೋರಿಸುತ್ತಿದೆ. ಧಾರವಾಡ ಅದೆಷ್ಟೋ ಉದ್ಯೋಗಾಕಾಂಕ್ಷಿಗಳಿಗೆ ನೆಲೆ ಕೊಟ್ಟಿದೆ. ಆದರೆ, ಅವರಿಗಿರುವ ಕಳವಳ ಏನೆಂದರೆ ಸರ್ಕಾರ ಅದ್ಯಾವಾಗ ಉದ್ಯೋಗಕ್ಕೆ ಅರ್ಜಿ ಕರೆಯುತ್ತದೆಯೋ […]

ಮತ್ತಷ್ಟು ಓದಿ..

ಧಾರವಾಡಕ್ಕೆ ಬಂದ ಸಾಲಿಮಠ ಪಾರ್ಥೀವ ಶರೀರ: ಅಂತಿಮ ನಮನ ಸಲ್ಲಿಸಿದ ಪೊಲೀಸ್ ಸಿಬ್ಬಂದಿ

ಧಾರವಾಡ: ಜೀವ ನೀರ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಬೇಕಾದರೂ ಏನಾದರೂ ಆಗಬಹುದು ಎಂಬುದಕ್ಕೆ ಮತ್ತೊಂದು  ನಿದರ್ಶನವೇ ಪಂಚಾಕ್ಷಿರಿ ಸಾಲಿಮಠ ಅವರ ದುರಂತ ಅಂತ್ಯ. ಮೊನ್ನೆಯಷ್ಟೇ ಧಾರವಾಡದಲ್ಲೇ ಕರ್ತವ್ಯ ನಿರ್ವಹಿಸಿ ಸಾಕಷ್ಟು ಹೆಸರು ಮಾಡಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ದುರಂತ ಅಂತ್ಯವಾದರೆ, ಇದೀಗ ಧಾರವಾಡದಲ್ಲೇ ಕರ್ತವ್ಯ ನಿರ್ವಹಿಸಿ ಹೋಗಿದ್ದ ಇನ್‌ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರ ಮತ್ತೊಂದು ದುರಂತ ಅಂತ್ಯವಾಗಿದೆ. ನಿನ್ನೆ ಅಣ್ಣಿಗೇರಿ ಪಟ್ಟಣದ‌ ಹೊರವಲಯದಲ್ಲಿ ದುರಂತ ಅಂತ್ಯ ಕಂಡ ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಗಿದ್ದ […]

ಮತ್ತಷ್ಟು ಓದಿ..

ಸಿದ್ಧಾರೂಡರ ಮಠದ ಲಕ್ಷ ದೀಪೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿ

ಹುಬ್ಬಳ್ಳಿ: ಕಾರ್ತಿಕ ಮಾಸದ ಅಂಗವಾಗಿ ಹುಬ್ಬಳ್ಳಿಯ ಭೂಕೈಲಾಸ ಶ್ರೀ ಸಿದ್ದಾರೂಢರ ಮಠದಲ್ಲಿ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ದೀಪೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ, ದೀಪ ಬೆಳಗಿಸಿ ಗುರು ಸಿದ್ದಾರೂಢರನ್ನು ಆರಾಧಿಸಿ ಪಾವನರಾದರು. ಹುಬ್ಬಳ್ಳಿ ಜನರ ಆರಾಧ್ಯ ದೈವ ಶ್ರೀ ಸಿದ್ದಾರೂಢ ಅಜ್ಜನ ಮಠ ಲಕ್ಷಾಂತರ ದೀಪಗಳಿಂದ ಬೆಳಗುತ್ತಿದೆ. ಹುಬ್ಬಳ್ಳಿ – ಧಾರವಾಡ ಭಕ್ತರು ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಮಹಿಳೆಯರು, ಪುರುಷರು, ಮಕ್ಕಳು ದೀಪ ಬೆಳಗಿಸಿ ಪ್ರಾರ್ಥನೆ ಮಾಡಿ ಭಕ್ತಿಭಾವ ಮೆರೆದರು.

ಮತ್ತಷ್ಟು ಓದಿ..