ಒತ್ತಡ ಕಡಿಮೆ ಮಾಡಲು ಕ್ರೀಡಾಕೂಟ ಅವಶ್ಯಕ: ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ.

ಬೆಳಗಾವಿ: (ನ.20) ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕ್ರೀಡಾಕೂಟ ಉತ್ಸವವನ್ನು ಪ್ರಾದೇಶಿಕ ಆಯುಕ್ತ ಜಾನಕಿ ಕೆ.ಎಂ. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು, ಇಂತಹ ಕ್ರೀಡಾಕೂಟದಿಂದ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒತ್ತಡ ಕಡಿಮೆ ಆಗುತ್ತದೆ‌. ಅವರಿಗೆ ಮತ್ತಷ್ಟು ಕೆಲಸ ಮಾಡಲು ಮಾನಸಿಕವಾಗಿ ಸದೃಢವಾಗುತ್ತಾರೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ […]

ಮತ್ತಷ್ಟು ಓದಿ..

ಕಲಿತ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ನವೆಂಬರ್ 11: ನಾವು ಕಲಿಯುವ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು. ಇಲ್ಲದಿದ್ದರೆ ಸಾಕ್ಷರರಾಗಿ ಪ್ರಯೋಜನೆವಿಲ್ಲ. ಶಿಕ್ಷಣ ವೈಚಾರಿಕತೆ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಯೋಜಿಸಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ದೇವರಾಜು ಅರಸು ಮತ್ತು ಹಾವನೂರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬಿಸಿಎಂ ಹಾಸ್ಟೆಲ್ಗಳಲ್ಲಿ ಓದಿರುವವರಿಗೆ ಉಚಿತ ಶಿಕ್ಷಣ, ಆಹಾರ, ವಸತಿಗಳು ದೊರೆತಿದ್ದು, […]

ಮತ್ತಷ್ಟು ಓದಿ..

ಸುವರ್ಣ ಮಹೋತ್ಸವ ಮುಂದಿನ 50 ವರ್ಷಕ್ಕೆ ಪೀಠಿಕೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ನವೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಮುಂದಿನ 50 ವರ್ಷಕ್ಕೆ ಪೀಠಿಕೆ ಹಾಕಿದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ […]

ಮತ್ತಷ್ಟು ಓದಿ..

ಪಾಕಿಸ್ತಾನಕ್ಕೆ ಮಲ್ಫೆಯ ಕೊಚ್ಚಿನ್ ಶಿಪ್ಯಾರ್ಡ್ ರಹಸ್ಯ ಮಾಹಿತಿ ಸೋರಿಕೆ: ಇಬ್ಬರ ಬಂಧನ

ಒಂದೂವರೆ ವರ್ಷಗಳಿಂದ ಮಾಹಿತಿ ರವಾನಿಸಿ ಹಣ ಗಳಿಸುತ್ತಿದ್ದ ಖದೀಮರು! ಉಡುಪಿ: ಮಲ್ಪೆಯ ಕೊಚ್ಚಿನ್‌ ಶಿಪ್ಯಾರ್ಡ್‌ ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು ಪಾಕಿಸ್ಥಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಇಬ್ಬರನ್ನೂ  ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ರೋಹಿತ್‌ (29) ಮತ್ತು ಸಂತ್ರಿ (37) ಬಂಧಿತರು. ಏನಿದರ ಹಿನ್ನೆಲೆ? ಯಾಕಾಗಿ ಈ ಕೆಲಸ ಮಾಡ್ತಾ ಇದ್ರು? ಈ ಸ್ಟೋರಿ ಓದಿ. ಮಲ್ಪೆಯ ಕೊಚ್ಚಿನ್‌ ಶಿಪ್ಯಾರ್ಡ್‌ ಕಂಪೆನಿ‌ ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ […]

ಮತ್ತಷ್ಟು ಓದಿ..

ಸಿದ್ಧಾರೂಡರ ಮಠದ ಲಕ್ಷ ದೀಪೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿ

ಹುಬ್ಬಳ್ಳಿ: ಕಾರ್ತಿಕ ಮಾಸದ ಅಂಗವಾಗಿ ಹುಬ್ಬಳ್ಳಿಯ ಭೂಕೈಲಾಸ ಶ್ರೀ ಸಿದ್ದಾರೂಢರ ಮಠದಲ್ಲಿ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ದೀಪೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ, ದೀಪ ಬೆಳಗಿಸಿ ಗುರು ಸಿದ್ದಾರೂಢರನ್ನು ಆರಾಧಿಸಿ ಪಾವನರಾದರು. ಹುಬ್ಬಳ್ಳಿ ಜನರ ಆರಾಧ್ಯ ದೈವ ಶ್ರೀ ಸಿದ್ದಾರೂಢ ಅಜ್ಜನ ಮಠ ಲಕ್ಷಾಂತರ ದೀಪಗಳಿಂದ ಬೆಳಗುತ್ತಿದೆ. ಹುಬ್ಬಳ್ಳಿ – ಧಾರವಾಡ ಭಕ್ತರು ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಮಹಿಳೆಯರು, ಪುರುಷರು, ಮಕ್ಕಳು ದೀಪ ಬೆಳಗಿಸಿ ಪ್ರಾರ್ಥನೆ ಮಾಡಿ ಭಕ್ತಿಭಾವ ಮೆರೆದರು.

ಮತ್ತಷ್ಟು ಓದಿ..

ಸಿಎಂ ಖುರ್ಚಿ ಕಿತ್ತಾಟ ಸಚಿವ ಕೆ.ಹೆಚ್.ಮುನಿಯಪ್ಪ ಶಾಕಿಂಗ್ ಹೇಳಿಕೆ

ದೇವನಹಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಯಲ್ಲಿರುವಾಗಲೇ ಸಚಿವ ಕೆ.ಹೆಚ್.ಮುನಿಯಪ್ಪ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ದೇವನಹಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಮುನಿಯಪ್ಪ, ಪವರ್ ಶೇರಿಂಗ್ ವಿಚಾರ ಎಐಸಿಸಿ ಅಧ್ಯಕ್ಷರ ಬಳಿ ಈಗಾಗಲೇ ಮಾತನಾಡಿದ್ದಾರಂತೆ. ಕೆಲ ದಿನಗಳ ಹಿಂದೆ ಸಚಿವ ಕೆ.ಹೆಚ್.ಮುನಿಯಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. ಮಾತುಕತೆ ಸಮಯದಲ್ಲಿ ಸಿಎಂ ಅವಧಿ ಬಗ್ಗೆ ಇಬ್ಬರ ನಡುವೆ ಚರ್ಚೆಯಾಗಿದ್ದು, ನೀವು ತಕ್ಷಣ ಏನಾದ್ರು ಒಂದು ತೀರ್ಮಾನ ಮಾಡಿ ಎಂದಿದ್ದೇನೆ. ಅಧಿಕಾರ ಹಂಚಿಕೆ ವಿಚಾರದಲ್ಲಿ […]

ಮತ್ತಷ್ಟು ಓದಿ..

ಗಡಿ ಜಿಲ್ಲೆ ಬೆಳಗಾವಿಗೂ ವಕ್ಕರಿಸಿತಾ ಗಳಲೆ ರೋಗ..!? 31 ಕೃಷ್ಣಮೃಗಗಳ ಬಲಿ ಪಡೆದಿದ್ದ ಮಾರಕ ಖಾಯಿಲೆ

ಬೆಳಗಾವಿ: ಗಡಿ‌ ಜಿಲ್ಲೆ ಬೆಳಗಾವಿಯಲ್ಲಿ ಗಳಲೆ ರೋಗ ದಾಂಗುಡಿ ಇಟ್ಟಿದೆ. ಬೆಳಗಾವಿಯ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ‌ಮೃಗಗಳ ಸಾವಿಗೆ ಕಾರಣವಾಗಿದ್ದ ಈ ಮಾರಕ ಗಳಲೆ ರೋಗ ಇದೀಗ ಬೆಳಗಾವಿ ‌ಜಿಲ್ಲೆಯ ಸಾಕು ಪ್ರಾಣಿಗಳಿಗೂ ವಕ್ಕರಿಸುತ್ತಿದೆ. ಹಿಮೋರೆಜಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾ ಮತ್ತು ಎಚ್.ಎಸ್ ಬ್ಯಾಕ್ಟೀರಿಯಾ ಸೋಂಕಿನಿಂದ ಬೆಳಗಾವಿ ಜಿಲ್ಲೆಯ ರೈತರು ಆತಂಕಕ್ಕಿಡಾಗಿದ್ದಾರೆ. ಗಂಟು ರೋಗದಿಂದ ಈಗಾಗಲೇ ‌ಏಳು ಜಾನುವಾರುಗಳು ಜಿಲ್ಲೆಯಲ್ಲಿ ಸಾವನ್ನಪ್ಪಿದ್ದು, ಸಾವಿಗೀಡಾದ ಜಾನುವಾರುಗಳಿಗೆ ಹಿಮೋರೆಜಿಕ್ ಸೆಪ್ಟಿಸೆಮೀಯಾ ಸೋಂಕು ತಾಗಿರುವ ಶಂಕೆ ದಟ್ಟವಾಗಿದೆ. ಬೆಳಗಾವಿಯಲ್ಲಿ ಹಿಮೋರೆಜಿಕ್ […]

ಮತ್ತಷ್ಟು ಓದಿ..

ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -25 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೊಡನೆ ಮಕ್ಕಳ ಸಮಾಲೋಚನೆ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬರು ಜೀವನದಲ್ಲಿ ತಮ್ಮದೇ ಆದ ಗುರಿ ಇಟ್ಟು ಕೊಳ್ಳಬೇಕು ಎಂದು ಕರೆ ನೀಡಿದರು. ನಾವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಂಬರ್ 1 ಸ್ಥಾನಕ್ಕೇರಲು ಪ್ರಯತ್ನಿಸಬೇಕು. ತಂದೆ, ತಾಯಿ, ಶಿಕ್ಷಕರ ಕನಸನ್ನು ನನಸಾಗಿಸಬೇಕು. ಪ್ರತಿಯೊಂದಕ್ಕೂ ಗುರಿ ಇಟ್ಟುಕೊಂಡು ಮುಂದೆ ಸಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಮಕ್ಕಳ […]

ಮತ್ತಷ್ಟು ಓದಿ..

ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ತ್ವರಿತ ಸಾಲ ಸೌಲಭ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್

ಬೆಂಗಳೂರು: ರಾಜ್ಯದ ಮಹಿಳೆಯರು ಸಣ್ಣ ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಸರ್ಕಾರವು ಆರ್ಥಿಕವಾಗಿ ಮತ್ತು ಎಲ್ಲ ರೀತಿಯಲ್ಲಿ ಬೆಂಬಲ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಭರವಸೆ ನೀಡಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳಾ ಉದ್ಯಮಿಗಳಿಗೆ ಅಥವಾ ಸ್ವಂತ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ಸರ್ಕಾರವು ಶೇಕಡಾ 3ರ ವಾರ್ಷಿಕ ಬಡ್ಡಿದರದಲ್ಲಿ 5 […]

ಮತ್ತಷ್ಟು ಓದಿ..

ಕೊನೆಗೂ ಬಯಲಾಯ್ತು 31 ಕೃಷ್ಣಮೃಗ ಸಾವಿನ ರಹಸ್ಯ: ಡಿಎಫ್ಓ ಕ್ರಾಂತಿ ಹೇಳಿದ್ದೇನು

ಬೆಳಗಾವಿ: ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಕೃಷ್ಣ ಮೃಗಗಳ ಸಾವಿನ ರಹಸ್ಯ ಬಹಿರಂಗವಾಗಿದೆ. ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆಯ ಲ್ಯಾಬ್ ವರದಿ ಬಂದಿದೆ. ದಕ್ಷಿಣ ಪ್ರಾದೇಶಿಕ ರೋಗಪತ್ತೆ ಪ್ರಯೋಗಾಲಯ ಪ್ರಾಣಿ ಆರೋಗ್ಯ ಮತ್ತು ಪಶುವೈದ್ಯಕೀಯ ಜೀವಶಾಸ್ತ್ರ ರೋಗ ಪತ್ತೆ ಬ್ಯಾಕ್ಟೀರಿಯಾಲಜಿ ಮತ್ತು ಮೈಕಾಲಜಿ ಬೆಂಗಳೂರು ಈ ವರದಿ ನೀಡಿದ್ದು, ಹಿಮೋರಿಜಿಕ್ ಸೆಪ್ಟಿಸೀಮಿಯಾ ಬ್ಯಾಕ್ಟೀರಿಯಾದಿಂದ ಮತ್ತು ಗಳಲೆ ರೋಗದಿಂದ ಮೃತಪಟ್ಟ ಬಗ್ಗೆ ವರದಿ ಬಂದಿದೆ ಈ ಕುರಿತು ಸುದ್ಧಿಗೋಷ್ಠಿ […]

ಮತ್ತಷ್ಟು ಓದಿ..